ಫೀಬ್	
ಟಿರಾನಿಡೀ ಕುಟುಂಬಕ್ಕೆ ಸೇರಿದ ನೋಣಹಿಡುಕ ಪಕ್ಷಿ. ಇದು ಉತ್ತರ ಅಮೇರಿಕಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಇದನ್ನು ಅಮೇರಿಕೆಯ ನೊಣಹಿಡುಕ ಎಂದು ಕರೆಯುತ್ತಾರೆ. ಸೈಯಾರ್ನಿಸ್ ಫೀಬ್ ಇದರ ಶಾಸ್ತ್ರೀಯ ಹೆಸರು. ಇದಕ್ಕೆ ವರ್ಣರಂಜಿತ ಗರಿಗಳುಂಟು. ಕಪ್ಪು ಬಣ್ಣದ ಶಿಖೆ, ಬೂದುಬಣ್ಣದ ಗರಿಗಳು ಮತ್ತು ಬಿಳಿಯ ಬಣ್ಣದ ಅಂಚಿನ ರೆಕ್ಕೆ ಹಾಗೂ ಬಾಲದಗರಿಗಳಿಂದ ಕೂಡಿದ ಈಹಕ್ಕಿ 1 ಸೆಂ.ಮಿ ಉದ್ದವಾಗಿದೆ. ಮೆಕೆನ್ಜಿ ದ್ವೀಪಗಳಲ್ಲಿ ಮೊಟ್ಟೆಯಿಡುತ್ತದೆ. ಸಂಯುಕ್ತ ಸಂಸ್ಥಾನಗಳ ದಕ್ಷಿಣ ಭಾಗ ಹಾಗೂ ಮೆಕ್ಸಿಕೊ ಪ್ರದೇಶಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಎತ್ತರ ಪ್ರದೇಶಗಳಲ್ಲಿ ತೊಲೆಗಳ ಮೇಲೆ ಅಥವಾ ಸೇತುವೆಗಳ ಕೆಳಗೆ ಅಥವಾ ಬೃಹತ್ ಭವನಗಳ ಹತ್ತಿರದಲ್ಲಿ ನದಿದಂಡೆಗಳಲ್ಲಿ ಗೂಡು ಕಟ್ಟುತ್ತದೆ. ಪಾಚಿ ಮತ್ತು ಮಣ್ಣಿನಿಂದ ಎಚಿತವಾಗುವ ಈಗೂಡುಗಳಿಗೆ ಹುಲ್ಲು, ಕೂದಲು ಮತ್ತು ತುಪ್ಪುಳು ಗರಿಗಳ ಮತ್ತೆ ಲೇಪನವಿರುತ್ತದೆ.
(ಎಚ್.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ